ಕರ್ನಾಟಕದ ಜಾನಪದ ಆಟಗಳು
ಅಳೀರ್ ಗುಡುಗುಡು

ಬಯಲು ಸೀಮೆ ಮತ್ತು ಕರ್ನಾಟಕದ ಉತ್ತರಭಾಗದಲ್ಲಿ ಕಂಡುಬರುವ ಆಟವಿದು. ಬಯಲು ಸೀಮೆಯಲ್ಲಿ ಕಬಡ್ಡಿ ಎಂದು ಕರೆದರೆ, ಉತ್ತರ ಕರ್ನಾಟಕದಲ್ಲಿ ಈ ಆಟಕ್ಕೆ ತೀತೀ (ತೂತು) ಅಥವಾ ಹುತುತು ಎಂದು ಕರೆಯುತ್ತಾರೆ.
ಗೋಲಿ ಆಟ

ಬುಗುರಿ, ಬಳೆಚೂರಿನ ಆಟ

ಆಟದ ನಿಯಮ: ಮೊದಲು ಹುಡಗರು ಬುಗುರಿಯನ್ನು ದಾರದಿಂದ ಹೊಸೆದ ಚಾಟಿಯನ್ನು ಸುತ್ತಿ ಆಟದಲ್ಲಿ ಇರುವ ಹುಡುಗುರು ಬಂಗರವನ್ನು ಸ್ಪರ್ಶಿಸಿ ತಕ್ಷಣ ನೆಲಕ್ಕೆ ಹಾಕಿ ನಂತರ ಚಾಟಿಯ ಸಹಾಯದಿಂದ ಯಾರು ಕೈಯಲ್ಲಿ ಹಿಡಿಯುತ್ತಾರೋ, ಅವರು ಆಟ ಆಡಲು ಸಿದ್ದವಾಗುತ್ತಾರೆ. ಅಂತಿಮವ ಬುಗುರಿಯನ್ನು ನೆಲದಲ್ಲಿ ಇಡುತ್ತಾನೆ. ಮಿಕ್ಕವರು ನೆಲದಲ್ಲಿ ಬಿದ್ದ ಬುಗುರಿಗೆ ಗುರಿ ಇಟ್ಟು ಹೋಡೆದು ಗುನ್ನ (ತೂತು) ಮಾಡುತ್ತಾರೆ. ಹೀಗೆಯೇ ಆಟ ಮುಂದುವರೆಯುತ್ತದೆ. ಈ ಆಟದಲ್ಲಿ ಬುಗುರಿಗಳು ಎರಡು ಹೋಳು ಆಗುವುದು ಸರ್ವೇ ಸಾಮಾನ್ಯ. ನೆಲಕ್ಕೆ ಬುಗುರಿ ಬೀಳದ ಹಾಗೆ ಕೈಯಲ್ಲಿ ಹಿಡಿದರೆ ಅದಕ್ಕೆ “ಅಂತರ ಮಂಗ” ಎನ್ನುತ್ತಾರೆ. ಆಟಗಾರನ ಅನುಭವದಿಂದ ಬುಗುರಿಯನ್ನು ಅನೇಕ ರೀತಿ ಆಡಿಸುತ್ತಾನೆ.
ಬಳೆಚೂರಿನ ಆಟ:ಸಾಮಾನ್ಯವಾಗಿ ಇಬ್ಬರು ಹೆಣ್ಣುಮಕ್ಕಳು ಕೂಡಿ ಆಡುವ ಒಳಾಂಗಣ ಆಟ. ಒಡೆದ ಬಳೆಗಳ ಚೂರುಗಳನ್ನು ಸಂಗ್ರಹಿಸಿ ಇಬ್ಬರೂ ಸಮನಾಗಿ ಹಂಚಿಕೊಂಡು, ಆಟಕ್ಕೆ ಇಂತಿಷ್ಟು ಎಂದು ನಿಗದಿಪಡಿಸಿಕೊಂಡು ಆಡುತ್ತಾರೆ. ಆಟದಲ್ಲಿ ಬಳಸುವ ಬಳೆಚೂರುಗಳನ್ನು ಒಟ್ಟುಗೂಡಿಸಿ ನೆಲದ ಮೇಲಿಟ್ಟು ಬಾಯಿಂದ ಜೋರಾಗಿ ಗಾಳಿ ಊದಿದಾಗ ಆ ಬಳೆಚೂರುಗಳು ಎಲ್ಲೆಡೆ ಚದುರುತ್ತವೆ. ಹೀಗೆ ಚದುರಿದ ಬಳೆ ಚೂರುಗಳನ್ನು ಒಂದು ಮತ್ತೊಂದಕ್ಕೆ ತಗುಲದಂತೆ ಆಯ್ದುಕೊಳ್ಳಬೇಕು. ಅಕಸ್ಮಾತ್ ತಗುಲಿದ ಪಕ್ಷದಲ್ಲಿ ಅವರು ಸೋತಂತೆ, ಮುಂದಿನವರು ಆಡುವರು. ಹೀಗೆ ಕೊನೆಯವರೆಗೂ ಆಡುವಾಗ ಯಾರು ಹೆಚ್ಚು ಬಳೆಯ ಚೂರುಗಳನ್ನು ಗೆಲ್ಲುತ್ತಾರೋ ಅವರೇ ಜಯಶಾಲಿಗಳು.
ಉಪ್ಪೇರುಪ್ಪ ಆಟ

ಚಿನ್ನಿ ದಾಂಡು

ವ್ಯವಸ್ಥೆ/ಸಲಕರಣೆಗಳು : ಆಡಲು ಸಾಕಷ್ಟು ಜಾಗ. ಸುಮಾರು ಒಂದು ಗೇಣು ಉದ್ದದ ನೆಲದ ಮೇಲೆ ಕೊರೆದ ಒಂದು ಗುಂಡಿ / ಕುಳಿ / ಉಳ್ಳ. ಗುಂಡಿಯಷ್ಟೇ ಉದ್ದವಾದ ಮರದ ಕೋಲಿನಿಂದ ಮಾಡಿದ ಚಿನ್ನಿ / ಹಾಣೆ / ಗಿಲ್ಲಿ. ಇದರ ಎರಡೂ ಬದಿ ಚೂಪಾಗಿರಬೇಕು. ಚಿನ್ನಿಗಿಂತ ಕನಿಷ್ಠ ಎರಡೂವರೆ-ಮೂರು ಪಟ್ಟು ಉದ್ದವಾದ, ಮರದ ಕೋಲಿನಿಂದ ಮಾಡಿದ ನೇರವಾದ ದಾಂಡು.
ಆಟದ ನಿಯಮಗಳು : ಆಟಗಾರನು ಗುಂಡಿಯ ಮೇಲೆ ಅಡ್ಡವಾಗಿ ಚಿನ್ನಿಯನ್ನು ಇಡಬೇಕು. ಎದುರು ತಂಡದ ಆಟಗಾರರು ಸನ್ನದ್ಧರಾಗಿರುವುದನ್ನು ತಿಳಿಯಲು ಹೋ ಎಂದು ಕೂಗುವ ರೂಢಿಯಿದೆ. ಎದುರು ತಂಡದವರು ಹೋ ಎಂದು ಉತ್ತರಿಸಿದ ಮೇಲೆ ಚಿನ್ನಿಯ ಕೆಳಭಾಗದಲ್ಲಿ ದಾಂಡನ್ನಿಟ್ಟು ಚಿನ್ನಿಯನ್ನು ಆದಷ್ಟು ದೂರ ಚಿಮ್ಮಬೇಕು. ನೆಲಕ್ಕೆ ಬೀಳುವ ಮೊದಲು ಅದನ್ನು ಎದುರು ತಂಡದ ಆಟಗಾರರು ಹಿಡಿಯಬಹುದು. ಹೀಗೆ ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ. ಎದುರು ತಂಡದವರಿಗೆ ಅದನ್ನು ಹಿಡಿಯಲಾಗದಿದ್ದರೆ ದಾಂಡನ್ನು ಗುಂಡಿಯಿಂದ ಒಂದು ದಾಂಡಿನಷ್ಟು ದೂರ ಹಿಂದೆ ಇಡಬೇಕು. ಎದುರು ತಂಡದ ಯಾವುದಾದರೂ (ಅಥವಾ ಚಿನ್ನಿ ಬಿದ್ದ ಸ್ಥಳಕ್ಕೆ ಹತ್ತಿರವಿದ್ದ) ಆಟಗಾರ ಅದಕ್ಕೆ ಚಿನ್ನಿ ಬಿದ್ದ ಸ್ಥಳದಿಂದ ಹೊಡೆಯಬೇಕು. ಚಿನ್ನಿ ದಾಂಡಿಗೆ ಮುಟ್ಟಿದರೆ ಆಟಗಾರ ತನ್ನ ಪಾಳಿಯನ್ನು ಕಳೆದುಕೊಂಡಂತೆ. ಚಿನ್ನಿ ಗುಂಡಿಯ ಒಳಗೆ ಬಿದ್ದರೆ ಕೂಡ ಆಟಗಾರ ತನ್ನ ಪಾಳಿಯನ್ನು ಕಳೆದುಕೊಂಡಂತೆ. ಚಿನ್ನಿ ಗುಂಡಿಯಿಂದ ಒಂದು ಚಿನ್ನಿಯಷ್ಟು ದೂರದಲ್ಲಿ ಬಿದ್ದರೆ ಆಟಗಾರ ಎಡಗೈಯಲ್ಲಿ ಆಟ ಮುಂದುವರೆಸಬೇಕು. ಆಟಗಾರನು ಚಿನ್ನಿಯನ್ನು ದಾಂಡಿನಿಂದ ಮೇಲಕ್ಕೆ ಚಿಮ್ಮಿಸಿ ಚಿನ್ನಿ ಗಾಳಿಯಲ್ಲಿರುವಾಗ ಅದಕ್ಕೆ ಹೊಡೆಯಬೇಕು. ಗಾಳಿಯಲ್ಲಿರುವಾಗ ಎಷ್ಟು ಸಲ ಬೇಕಾದರೂ ಹೊಡೆಯಬಹುದು. ಹೀಗೆ ಮೇಲೆ ಚಿಮ್ಮಿಸಿದಾಗ ಎದುರು ತಂಡದ ಆಟಗಾರರು ಚಿನ್ನಿಯನ್ನು ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ. ಮೂರು ಬಾರಿ ಚಿನ್ನಿಯನ್ನು ಹೀಗೆ ಹೊಡೆಯಲಾಗದಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ. ಚಿನ್ನಿಯನ್ನು ಎರಡಕ್ಕಿಂತ ಹೆಚ್ಚು ಬಾರಿ ಹೊಡೆದರೆ ಗಿಲ್ಲಿ ಎಂದು ಕರೆಯಲಾಗುತ್ತದೆ. (ಎರಡು ಬಾರಿ ಹೊಡೆದರೆ ಒಂದು ಗಿಲ್ಲಿ, ಮೂರು ಬಾರಿ ಹೊಡೆದರೆ ಎರಡು ಗಿಲ್ಲಿ.. ಹೀಗೆ. ಸ್ಥಳದಿಂದ ಸ್ಥಳಕ್ಕೆ ಈ ನಿಯಮ ಬದಲಾಗಬಹುದು) ಚಿನ್ನಿ ಬಿದ್ದ ಸ್ಥಳದಿಂದ ಗುಂಡಿಯವರೆಗಿನ ದೂರವನ್ನು ಆಟಗಾರ ಊಹಿಸಬೇಕು. ಗಿಲ್ಲಿ ಆಗಿದ್ದರೆ ಚಿನ್ನಿಯಿಂದ ಅಳೆಯಬೇಕು. ಎಷ್ಟು ಬಾರಿ ಗಿಲ್ಲಿಯಾಗಿದೆಯೋ ಅಷ್ಟರಿಂದ ಅಂಕಗಳನ್ನು ಗುಣಿಸಬೇಕು. ಗಿಲ್ಲಿ ಆಗಿಲ್ಲದಿದ್ದರೆ ದಾಂಡಿನಿಂದ ಅಳೆಯಬೇಕು. ಊಹಿಸಿದ್ದಕ್ಕಿಂತ ಕಡಿಮೆ ದೂರವಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ. ಸರಿಯಾಗಿ ಊಹಿಸಿದರೆ ಆಟಗಾರ ಅಥವಾ ಅವನ ತಂಡಕ್ಕೆ ಅಷ್ಟು ಅಂಕಗಳು ದೊರೆತಂತೆ. ಮೊದಲೇ ನಿರ್ಧರಿಸಿದ ಅಂಕವನ್ನು ತಲುಪುವವರೆಗೆ, ಅಥವಾ ಯಾರು/ಯಾವ ತಂಡ ಹೆಚ್ಚು ಅಂಕ ಗಳಿಸಿರುತ್ತದೆಯೋ ಆ ಆಟಗಾರ / ತಂಡ ಗೆದ್ದಂತೆ.
ಅಣ್ಣೀ ಕಲ್ಲಾಟ

ಚೆಂಡಾಟ (ಲಗೋರಿ)

ಲಗ್ಗೆ ಚೆಂಡಾಟದಲ್ಲಿ, ಮೊದಲಿಗೆ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಒಂದು ಸಣ್ಣ ವೃತ್ತ ರಚಿಸುತ್ತಾರೆ. ಆ ವೃತ್ತದೊಳಗೆ ಒಂದು ಮರದ ಕಿರು ಹಲಗೆ ಅಥವಾ ಒಡೆದ ಮಡಿಕೆಯ ಚೂರುಗಳು ಇಲ್ಲವೆ ಕಲ್ಲಿನ ಹಲ್ಲೆಗಳನ್ನು ಒಂದರ ಮೇಲೊಂದರಂತೆ ಪೇರಿಸಿ ಇಡುತ್ತಾರೆ. ಕಾಯುವವರು ಈ ಲಗ್ಗೆಯ ಎಡಬಲ ಬದಿಗಳಲ್ಲಿ ನಿಲ್ಲುತ್ತಾರೆ. ಹೊಡೆಯುವವರು ಸರದಿ ಪ್ರಕಾರ ಒಬ್ಬೊಬ್ಬರಾಗಿ ಬಂದು ನಿರ್ದಿಷ್ಟ ದೂರದಿಂದ ಲಗ್ಗೆಗೆ ಗುರಿ ಇತ್ತು ಚೆಂಡನ್ನು ಎಸೆಯುತ್ತಾರೆ. ಒಬ್ಬೊಬ್ಬರಿಗೂ ಮೂರು ಬಾರಿ ಮಾತ್ರ ಅವಕಾಶ. ಈ ಅವಕಾಶದಲ್ಲಿ ಲಗ್ಗೆಯನ್ನು ಉರುಳಿಸಬೇಕು. ಲಗ್ಗೆಯನ್ನು ಉರುಲಿಸದೆ ಪುಟ ನೆಗೆದ ಚೆಂಡನ್ನು ಕಾಯುವವನು ಹಿಡಿದುಕೊಂಡರೆ, ಚೆಂಡುಹೊಡೆಯುವವನ ಅವಕಾಶ ಕೊನೆಯಾಗುತ್ತದೆ. ಹೊಡೆಯುವವರ ಪಕ್ಷದಲ್ಲಿ ಯಾರ ಚೆಂಡೂ ಲಗ್ಗೆಯನ್ನು ಬೀಳಿಸದಿದ್ದರೆ ಅಥವಾ ಪುಟ ನೆಗೆದು ಚೆಂಡು ಹಿಡಿಯಲ್ಪಟ್ಟರೆ ಆಗ ಅವರು ಸೋತಂತೆ. ಒಟ್ಟು ಕ್ರಿಯೆ ಬದಲಾಗಿ ಕಾಯುವವರು ಚೆಂಡು ಹೊಡೆಯುವವರಾಗುತ್ತಾರೆ.
ಚೆಂಡು ಲಗ್ಗೆಗೆ ತಗುಲಿ ಲಗ್ಗೆ ಉರುಳಿ ಬಿದ್ದಾಗ, ಲಗ್ಗೆ ಹೊಡೆದವರು ಚೆಂಡನ್ನು ತಮ್ಮ ಕೈಯಲ್ಲಿ ಹಿಡಿದು ಹರಿತೋ ಹರಿತೋ ಎಂದು ಕೂಗುತ್ತಾ ಚೆಂಡು ಕಾಯುವವರನ್ನು ಬೆನ್ನಟ್ಟಿ ಹೋಗುತ್ತಾರೆ. ಗುರಿ ಇಟ್ಟು ಅವರಿಗೆ ಚೆಂಡಿನಲ್ಲಿ ಹೊಡೆಯುತ್ತಾರೆ. ಲಗ್ಗೆ ಉರುಳಿಸಿದ ಚೆಂಡು, ಹೊಡೆಯುವವರ ಪಕ್ಷದ ಒಬ್ಬನ ಬಳಿ ಇರುತ್ತದೆ.ಆದರೂ ಹೊಡೆಯುವ ಪಕ್ಷದವರೆಲ್ಲರೂ ತಮ್ಮ ಬಳಿಯೇ ಚೆಂಡಿದೆ ಎನ್ನುವಂತೆ ನಟಿಸುತ್ತಾ ಎದುರಾಳಿಗಳಿಗೆ ಚೆಂಡಿನಿಂದ ಹೊದೆಯುವವರಂತೆ ಅಭಿನಯಿಸುತ್ತಾ ಅಟ್ಟಾಡಿಸಿಕೊಂಡು ಹೋಗುತ್ತಾರೆ. ಚೆಂಡು ಇರುವವನು ಎಸೆದ ಚೆಂಡು, ಕಾಯುವವರಿಗೆ ತಗುಲಿದರೆ ಆಟ ಗೆದ್ದಂತೆ. ಇಲ್ಲವಾದರೆ, ಕಾಯುವ ಪಕ್ಷದವರು ಚೆಂಡಿನ ಏಟು ತಗುಲದಂತೆ ಧಾವಿಸಿ ಬಂದು ಲಗ್ಗೆಯನ್ನು ಮುಟ್ಟಿದರೆ ಹೊಡೆಯುವವರು ಸೋತಂತೆ. ಮತ್ತೆ ಆಟ ಮೊದಲಿನಿಂದ ಆರಂಭವಾಗುತ್ತದೆ.
ಜೋಡಿ ಚೆಂಡಾಟವು ಸಹ ಲಗ್ಗೆ ಆಟದಂತೆಯೇ ಇರುತ್ತದೆ. ಇದನ್ನು ಹನಸೋಗೆ ಚೆಂಡು ಎಂದೂ ಕರೆಯುತ್ತಾರೆ. ಜೋಡಿ ಚೆಂಡಾಟದಲ್ಲಿ ಒಂದು ಚೆಂಡಿಗೆ ಬದಲಾಗಿ ಎರಡು ಚೆಂಡುಗಳಿರುತ್ತವೆ. ಗಾರು ಚೆಂಡಾಟದಲ್ಲಿ, ಮೊದಲೇ ನಿಗದಿಪಡಿಸಿದ ಸ್ಥಳದಲ್ಲಿ ಮೂರು-ನಾಲ್ಕು ಅಡಿಗಳ ಅಂತರದಲ್ಲಿ ಎರಡು ದಪ್ಪ ಕಲ್ಲುಗಳನ್ನು ಅವುಗಳ ಮೇಲೆ ಅಡ್ಡಲಾಗಿ ಒಂದು ಕಡ್ಡಿಯನ್ನಿಡುತ್ತಾರೆ. ಚೆಂಡನ್ನು ಕಾಯುವವರು ಸುಮಾರು ಇಪ್ಪತ್ತು ಗಜಗಳ ದೂರದಲ್ಲಿ ನಿಂತು ಚೆಂಡನ್ನು ಕಾಯುತ್ತಾರೆ. ಹೊಡೆಯುವವರು ಕಲ್ಲಿನ ಮೇಲಿರಿಸಿದ ಕಡ್ಡಿಯ ಬಳಿ ನಿಂತುಕೊಂಡು ಎಡಗೈಯಲ್ಲಿ ಚೆಂಡನ್ನು ಹಿಡಿದು ಬಲಗೈಯಲ್ಲಿ ಹಿಡಿದ ಉದ್ದನೆಯ ದಾಂಡಿನಿಂದ ಹೊಡೆಯುತ್ತಾರೆ. ಕಾಯುತ್ತಾ ನಿಂತವರು ಕ್ಯಾಚ್ ಹಿಡಿದರೆ ಹೊಡೆದವನು ಸೋತಂತೆ ಅಥವಾ ಕಾಯುವವನು ಚೆಂಡು ಬಿದ್ದ ಜಾಗದ ವೇಗದಿಂದ ಅದನ್ನು ಗುರಿ ಇಟ್ಟು ಎಸೆದು ಕಲ್ಲುಗಳ ಮೇಲಿರಿಸಿದ ಕಡ್ಡಿ ಉರುಳಿಸಿದರೆ, ಇಲ್ಲವೆ ಕಡ್ಡಿಯ ಅಡಿಯಲ್ಲಿ ಎರಡು ಕಲ್ಲುಗಳ ಮಧ್ಯೆ ನುಸುಳಿ ಹೋದರೂ ಸಹ ಹೊಡೆದವನು ಸೋತಂತೆಯೇ. ನಂತರ ಬೇರೊಬ್ಬನು ಆಟವನ್ನು ಆರಂಭಿಸುತ್ತಾನೆ.
ಸೂರು ಚೆಂಡಾಟದಲ್ಲಿ ಎದುರಾಳಿಗಳು ಎಂಬುದಿರುವುದಿಲ್ಲ. ಎಲ್ಲರೂ ಗುಂಪಾಗಿ ಕಲೆತು, ಮೊದಲು ಚೆಂಡನ್ನು ಮೇಲಕ್ಕೆ ಹಾರಿಸುತ್ತಾರೆ. ಚೆಂಡು ಯಾರ ಕೈಗೆ ಸಿಗುತ್ತದೆಯೋ ಅವರು ಮತ್ತೊಬ್ಬರಿಗೆ ಬೀಸಿ ಹೊಡೆಯುವುದು. ಸಿಕ್ಕದವರಿಗೆ ಸೀರುಂಡೆ ಇದ್ದಂತೆ. ಚೆಂಡಿನ ಏಟು ಬಲವಾಗಿ ಬೀಳುವುದರಿಂದ ಚಿಕ್ಕಮಕ್ಕಳಿಗಿಂತ ದೊಡ್ದವರೇ ಹೆಚ್ಚಾಗಿ ಆಡುವುದು. ಬಯಲು ಸೀಮೆಯಲ್ಲಿ ಪ್ರಚಲಿತದಲ್ಲಿದೆ. ರಾಮ ಚೆಂಡಾಟದಲ್ಲಿ ಇಬ್ಬರಿಗಿಂತ ಹೆಚ್ಚು ಜನರಿದ್ದು, ಒಂದೇ ನೇರದಲ್ಲಿ ದೂರ ದೂರ ನಿಲ್ಲುತ್ತಾರೆ. ಸೂರು ಚೆಂಡಿನಂತೆ ಇಲ್ಲಿಯೂ ಚೆಂಡು ಸಿಕ್ಕವನು ಮತ್ತೊಬ್ಬರಿಗೆ ಬಾರಿಸುತ್ತಾನೆ. ಹೊಡೆತ ತಿಂದು ಚೆಂಡು ಸಿಕ್ಕದಿರುವ ಸಾಧ್ಯತೆಗಳೂ ಇದೆ.
ಚೆಂಡಾಟದಲ್ಲಿ ಪ್ರಧಾನವಾಗಿ ಕಂಡುಬರುವಂಥದ್ದು ಮಾನಸಿಕ ಏಕಾಗ್ರತೆ. ಗುರಿ ಎಸೆತ, ಏಟನ್ನು ತಪ್ಪಿಸಿಕೊಳ್ಳುವ ಚಾಕಚಕ್ಯತೆ. ಬೀಸಿ ಹೊಡೆಯುವ ಚಾತುರ್ಯ, ಶೀಘ್ರ ಚಲನೆ ಇತ್ಯಾದಿ. ಚೆಂಡಾಟದಲ್ಲಿ ಬಳಸುವ ಚೆಂಡು ಸಾಮಾನ್ಯವಾಗಿ ಚಿಂದಿ ಬಟ್ಟೆಗಳನ್ನು ಒಂದರೊಳಗೊಂದು ಸುತ್ತಿ ಹೊಲಿದು ನಿರ್ಮಿಸಿದ್ದು.
ಕೆರೆ-ದಂಡೆ ಆಟ

ಕುಂಟಾಟ, ಕಂಬ ಆಟ

ಕಂಬ ಆಟ
ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಗಂಡುಮಕ್ಕಳು ಆಡುವ ಹೊರಾಂಗಣ ಆಟ. ಈ ಆಟದಲ್ಲಿ ಎಷ್ಟು ಜನ ಬೇಕಾದರೂ ಪಾಲ್ಗೊಳ್ಳಬಹುದು. ಅವರ ಬಳಿ ಚೂಪು ತುದಿಯುಳ್ಳ ತುಸು ಉದ್ದನೆಯ ಕಬ್ಬಿಣದ ಕಂಬಿ ಇರಬೇಕು. ಚೆನ್ನಾಗಿ ನೆನೆದ ಆದರೆ ಕೆಸರಾಗದಂತಹ ತೇವವುಳ್ಳ ಸ್ಥಳವೇ ಈ ಆಟಕ್ಕೆ ಕ್ರೀಡಾಂಗಣ. ಇಂತಹ ಸ್ಥಳದಲ್ಲಿ ಒಂದು ವೃತ್ತವನ್ನು ಬರೆದು, ಆಟದಲ್ಲಿ ಪಾಲ್ಗೊಳ್ಳುವ ಆಟಗಾರರೆಲ್ಲರೂ ತಮ್ಮ ಬಳಿ ಇರುವ ಕಬ್ಬಿಣದ ಕಂಬಿಯನ್ನು ವೃತ್ತದ ಒಳಗಿನ ನೆಲಕ್ಕೆ ಎಸೆದು ಕಚ್ಚಿಸಬೇಕು. ಕಂಬಿ ಎಸೆದಾಗ ಅದು ನೆಲಕ್ಕೆ ಕಚ್ಚಿಕೊಳ್ಳದಿದ್ದಲ್ಲಿ ಆ ಕಂಬಿಯವನು ಕಳ್ಳನಾಗಬೇಕು. ಆಮೇಲೆ ಉಳಿದ ಗೆದ್ದ ಆಟಗಾರರು ಒಬ್ಬೊಬ್ಬರಾಗಿ ಕಂಬಿಯನ್ನು ನೆಲಕ್ಕೆ ಕಚ್ಚಿಸುತ್ತಾ ಮುಂದೆ ಮುಂದೆ ಸಾಗುವರು. ಕಂಬಿ ಕಚ್ಚಿಸುತ್ತಾ ಹೋಗುವಾಗ ಎಲ್ಲಿ ಕಂಬಿ ನೆಲಕ್ಕೆ ಕಚ್ಚಿಕೊಳ್ಳುವುದಿಲ್ಲವೋ ಆಗ ಆ ಕಂಬಿ ಎಸೆದವನ ಆಟ ಹೋಗಿ ಮತ್ತೊಬ್ಬನು ಅಲ್ಲಿಂದ ಮುಂದಕ್ಕೆ ಅದೇ ರೀತಿಯಲ್ಲಿ, ಕಂಬಿ ಕಚ್ಚಿಸುತ್ತಾ ಮುಂದುವರಿಯುತ್ತಾನೆ. ಇದೇ ರೀತಿ ಗೆದ್ದವರೆಲ್ಲರೂ ನೆಲಕ್ಕೆ ಕಂಬಿ ಕಚ್ಚಿಸುವುದು ಮುಗಿದ ಮೇಲೆ, ಕಂಬಿ ಕಚ್ಚಿಸುವುದು ಎಲ್ಲಿಗೆ ನಿಂತಿರುತ್ತದೆಯೋ ಅಲ್ಲಿಂದ ಹಿಡಿದು ಕಂಬಿ ಕಚ್ಚಿಸುವುದನ್ನು ಪ್ರಾರಂಭಿಸಿದ ವೃತ್ತದವರೆಗೂ ಕಳ್ಳನಾದವನು ಕುಂಟಿಕೊಂಡು ಬರಬೇಕು. ಅಲ್ಲಿಗೆ ಆಟ ಮುಕ್ತಾಯ, ಮತ್ತೆ ಮೊದಲಿನಂತೆ ಆಟ ಆರಂಭ.
ಉಪ್ಪುಪ್ಪು ಕಡ್ಡಿ

ಉಪ್ಪುಪ್ಪು ಕಡ್ಡಿ
ಉಪ್ನೇರಳೆ ಕಡ್ಡಿ
ಯಾವೂರ್ಲೆ ಬಡ್ಡಿ
ಕೆರೆ ಮ್ಯಾಗಳ ದೊಡ್ಡಿ
ಎಂದು ತಮಾಶೆ ಪದ ಹೇಳುವುದುಂಟು.
ಬಗಾಟ ಬಗರಿ

ಬಗಾಟ ಬಗರಿ ಆಡೋಣ ಬಾ
ಬಣ್ಣದ ಚವರಿ ಬೀಸೋಣ ಬಾ
ದೇವರಗಿ ಹೋಗ್ತೀನಿ ದಂಡಿ ತಾ
ತಂಬ್ತೊಂಡ ಹೋಗ್ತೀನಿ ಗಿಂಡಿ ತಾ
ಕಟ್ಟಿ ಮ್ಯಾಲ ಕರ | ಉತ್ತತ್ತಿ ಸರ
ಗಿರಿಗಿರಿ ಗಿಂಡಿ | ಈಬತ್ತಿ ಉಂಡಿ
ಉತ್ತರ ಕರ್ನಾಟದಲ್ಲಿ ಪ್ರಚಲಿತದಲ್ಲಿರುವ ಬಗಾಟ ಬಗರಿ ಆಟವನ್ನೇ ಹೋಲುವ ದಕ್ಷಿಣ ಕರ್ನಾಟಕದಲ್ಲಿ ರೂಢಿಯಲ್ಲಿರುವ ಆಟಕ್ಕೆ ಕುಕ್ಕುರು ಬಸವಿ ಎಂದು ಕರೆಯುತ್ತಾರೆ. ಇಲ್ಲಿಯೂ ಹೆಣ್ಣು ಮಕ್ಕಳದೇ ಪ್ರಾಧಾನ್ಯತೆ. ಕತ್ತರಿಯಾಕಾರದಲ್ಲಿ ತಮ್ಮ ಕೈಗಳ ಬೆರಳುಗಳನ್ನು ಹೆಣೆದುಕೊಂಡು ದೇಹವನ್ನು ಹಿಂದಕ್ಕೆ ಬಾಗಿಸಿ ವೃತ್ತಾಕಾರದಲ್ಲಿ ತಿರುಗುವುದನ್ನು ಕಂಡಾಗ ನೋಡುಗರ ಮನಸ್ಸನ್ನು ಸೆಳೆಯುತ್ತದೆ. ಕುಕ್ಕುರು ಬಸವಿ ಆಟದೊಂದಿಗೆ ಕೆಳಕಂಡ ಹಾಡು ಹಾಡುತ್ತಾರೆ.
ರತ್ತೋ ರತ್ತೋ ರಾಯನ ಮಗಳೆ
ಬಿತ್ತೋ ಬಿತ್ತೋ ಭೀಮನ ಮಗಳೆ
ಹದಿನಾರೆಮ್ಮೆ ಕರೆಯಲಾರೆ ಕಾಯ್ಸಲಾರೆ
ಬೈಟು ಕಂಬ ಬಾಳೇ ಕಂಬ
ಕುಕ್ಕುರು ಬಸವಿ ಕೂರೇ ಬಸವಿ.
ಬಿತ್ತೋ ಬಿತ್ತೋ ಭೀಮನ ಮಗಳೆ
ಹದಿನಾರೆಮ್ಮೆ ಕರೆಯಲಾರೆ ಕಾಯ್ಸಲಾರೆ
ಬೈಟು ಕಂಬ ಬಾಳೇ ಕಂಬ
ಕುಕ್ಕುರು ಬಸವಿ ಕೂರೇ ಬಸವಿ.
ಟೋಪಿಯಾಟ

ಟೋಪಿಯಾಟ ಕುತೂಹಲಕಾರಿಯಾದ ಆಟ. ಇದರಲ್ಲಿ ಆಟಗಾರರಿಗೆ ಸೂಕ್ಷ್ಮಮತಿ ಮತ್ತು ಊಹಾ ಶಕ್ತಿಗಳಿರಬೇಕು. ತಲೆ ಬಗ್ಗಿಸಿ ಕುಳಿತಿರುವಾಗ ಟೋಪಿ ಹಾಕುವವನು ತನ್ನ ಹಿಂದೆ ಕ್ಷಣಕಾಲ ನಿಂತರೂ ಸುಳಿವು ಹಿಡಿದು ಟೋಪಿಯು ತನ್ನ ಹಿಂದೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತಿರಬೇಕು. ತನಗೆ ಏಟು ಬೀಳುವ ಮೊದಲೇ ಎದ್ದು ಟೋಪಿ ತೆಗೆದುಕೊಂಡು ತಾನು ಸುತ್ತಬೇಕು. ಅಲ್ಲದೆ, ತನ್ನ ಹಿಂದೆ ಟೋಪಿ ಇಟ್ಟವನ ಹಿಂದೆಯೇ ಟೋಪಿ ಇಟ್ಟು ಛಲ ತೀರಿಸಿಕೊಳ್ಳುವಂತಿರಬೇಕು.
ಆಟ ಆಡುವ ಸಂದರ್ಭದಲ್ಲಿ ಹಾಡು ಹೇಳುವುದುಂಟು.
ಟೋಪಿ ಬೇಕೆ ಟೋಪಿ
ಎಂಥಾ ಟೋಪಿ?
ಚಿನ್ನದ ಟೋಪಿ.
ಎಷ್ಟು ರೂಪಾಯಿ?
ಸಾವಿರ ರೂಪಾಯಿ.
ಕೊಡು ಕೊಡು ಬೇಕೇ ಬೇಕೆ?
ಟೋಪಿ ಬೇಕೆ ಟೋಪಿ
ಎಂಥಾ ಟೋಪಿ?
ಚಿನ್ನದ ಟೋಪಿ.
ಎಷ್ಟು ರೂಪಾಯಿ?
ಸಾವಿರ ರೂಪಾಯಿ.
ಕೊಡು ಕೊಡು ಬೇಕೇ ಬೇಕೆ?
ಆನೆ ಕುರಿ ಆಟ/ಕಾಗೆ-ಗಿಳಿ ಆಟ

ಕಾಗೆ–ಗಿಳಿ ಆಟ

ಆಟ ಮುಂದುವರಿದಂತೆ ಕಾಗೆಗಳು ಗಿಳಿಯನ್ನು ‘ನಿಮ್ಮನ್ನು ನಿಂತರೆ ಮುಟ್ಟಲೆ, ಕುಳಿತರೆ ಮುಟ್ಟಲೆ’ ಎಂದು ಕೇಳುತ್ತವೆ. ನಿಂತಾಗ ಮುಟ್ಟುವುದು ಸುಲಭವಾದ್ದರಿಂದ ಕುಳಿತರೆ ಮುಟ್ಟಿ ಎಂದು ಗಿಳಿಗಳು ಕಾಗೆಗಳಿಗೆ ಹೇಳುತ್ತವೆ. ಪ್ರಶ್ನೆ-ಉತ್ತರದ ನಂತರ ಗಿಳಿಗಳನ್ನು ಕಾಗೆಗಳು ಮುಟ್ಟಿದರೆ, ಮುಟ್ಟಿಸಿಕೊಂಡ ಗಿಳಿಗಳು ಕಾಗೆಗಳಾಗುತ್ತವೆ. ಎಲ್ಲಾ ಗಿಳಿಗಳು ಕಾಗೆಗಳಾಗುವವರೆಗೂ ಆಟ ಮುಂದುವರಿಯುತ್ತದೆ. ಕೆಲವು ಬಾರಿ ಎಲ್ಲಾ ಗಿಳಿಗಳನ್ನು ಮುಟ್ಟಲು ಕಾಗೆಗಳಿಂದಾಗದಿದ್ದಲ್ಲಿ ಅವು ಸೋಲನ್ನು ಒಪ್ಪಿಕೊಂಡು ಆಟ ಕೊನೆಯಾಗುತ್ತದೆ. ಕಾಗೆ-ಗಿಳಿ ಆಟವು ವಿಶಾಲವಾದ ಮೈದಾನದಲ್ಲಿ ನಿಗದಿಪಡಿಸಿದ ಗಡಿಯೊಳಗೆ ನಡೆಯುತ್ತದೆ.
ಚನ್ನೆಮಣೆಯಾಟ

ಪ್ರತಿ ಸಾಲಿನಲ್ಲಿ ಏಳು ಗುಣಿಗಳಿದ್ದು ಎರಡೂ ಸಾಲುಗಳಲ್ಲಿ ಹದಿನಾಲ್ಕು ಗುಣಿಗಲಳಿರುವ ಮಣೆಯ ಮಧ್ಯಭಾಗದಲ್ಲಿ ಕಲಾತ್ಮಕವಾದ ಸುಂದರ ಕುಸುರಿ ಕೆತ್ತನೆಗಳಿರುವ ಚನ್ನೆಮಣೆಗಳೂ ಕಾಣಸಿಗುತ್ತವೆ. ಬಯಲುಸೀಮೆಯಲ್ಲಿ ಈ ಆಟಕ್ಕೆ ಹುಣಸೆಬೀಜ, ಪಾರಿವಾಳದ ಬೀಜಗಳನ್ನು, ಮಲೆನಾಡಿನಲ್ಲಿ ಹಾಲಿವಾಣದ ಬೀಜಗಳನ್ನು, ತುಳುನಾಡಿನಲ್ಲಿ ಮಂಜೊಟ್ಟಿ, ಗುಲಗಂಜಿ ಅಥವಾ ಹೊಂಗಾರೆ ಮರದ ಬೀಜಗಳನ್ನು ಬಳಸುತ್ತಾರೆ. ಚನ್ನೆಮಣೆ ಆಟದಲ್ಲಿ ವೈವಿಧ್ಯಮಯವಾದ ಪ್ರಕಾರಗಳಿವೆ. ತುಳುನಾಡಿನಲ್ಲಿ ಸುಮಾರು ೨೭ ಬಗೆಯ ಆಟಗಳನ್ನು ಆಡುತ್ತಾರೆ. ಬಯಲು ಸೀಮೆಯಲ್ಲಿ ಸಾದಾ ಆಟ, ಕಚ್ಚಾಟ, ರಾಜಾಟ, ಕಾಳಿ ಆಟ, ಸೀತೆ ಆಟ, ಮೊದಲಾದ ಪ್ರಕಾರಗಳು ರೂಢಿಯಲ್ಲಿವೆ.
ಚನ್ನೆಮಣೆ ಆಟದಲ್ಲಿ ಮುಖ್ಯವಾಗಿ ಆಟಗಾರನ ಜಾಣ್ಮೆ, ನೆನಪಿನ ಶಕ್ತಿ, ಮುಂದಾಲೋಚನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾವ ಮನೆಯನ್ನು ಮೊದಲು ಹಿಡಿದರೆ ಹೆಚ್ಚಿನ ಕಾಯಿಗಳನ್ನು ಗೆಲ್ಲಬಹುದು ಎನ್ನುವುದು ಕ್ಷಣದಲ್ಲಿ ತರ್ಕಿಸಿ ಕಾಯಿ ನಡೆಸಬೇಕಾಗಿರುತ್ತದೆ. ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಮಹತ್ವ ಪಡೆದಿರುವ ಈ ಆಟವು ಹಲವಾರು ವಿಧಿನಿಷೇಧಗಳನ್ನು ತನ್ನಲ್ಲಿ ಒಳಗೊಂಡಿದೆ. ಸೋದರರು, ಸೋದರಿಯರು ಮತ್ತು ದಂಪತಿಗಳು ಈ ಆಟವನ್ನು ಆಡಬಾರದು, ಚನ್ನೆಮಣೆಯನ್ನು ಬೇರೆಯವರಿಗೆ ಎರವಲು ಕೊಡಬಾರದು, ಜೂಜಿಗೆಂದು ಆಡಬಾರದು, ಹೆಣ್ಣುಮಕ್ಕಳು ತಮ್ಮ ಗಂಡನ ಅಕ್ಕ ಅಥವಾ ಅಣ್ಣನ ಜೊತೆ ಆಡಬಾರದು ಮುಂತಾದ ನಿಷೇಧಗಳಿವೆ. ಕೆಲವು ಕಡೆಗಳಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳಿಗೆ ಚನ್ನೆಮಣೆಯನ್ನು ಬಳುವಳಿಯಾಗಿ ಕೊಡುವುದುಂಟು.
No comments:
Post a Comment